Nage
1.ಗಂಡ : ಏನೇ ಇವತ್ತು ಸಾಂಬಾರನಲ್ಲಿ ಎರಡು ರೂಪಾಯಿ ಕಾಯಿನ್ ಹಾಕಿದಿಯಾ?
ಹೆಂಡ್ತಿ : ನೀವೇ ಹೇಳ್ತಾ ಇದ್ರಲ್ಲ ಅಡುಗೇಲಿ ಚೇಂಜ್ ಇರಲಿ ಅಂತ
2.ಹೊಸದಾಗಿ ಮದುವೆಯಾಗಿತ್ತು...
ಬೆಳಿಗ್ಗೆ ಗಂಡ, ಹೆಂಡತಿಯ ಮೇಲೆ ನೀರು ಎರಚಿದ...
ಹೆಂಡತಿ (ಕೋಪದಿಂದ ನಿದ್ರೆಯಿಂದ ಮೇಲೆದ್ದು ) ಯಾಕ್ರೀ ನೀರು ಹಾಕಿದ್ದು ಏನಾಗಿದೆ ನಿಮಗೆ ?
3.ತರಕಾರಿ ಅಂಗಡಿಯವ ಬಾಗಿಲು ತೆರೆದು ಎಲ್ಲಾ ತರಕಾರಿಗೆ ನೀರು ಸಿಂಪಡಿಸುವುದರಲ್ಲಿ ಮಗ್ನನಾಗಿದ್ದ ಬಹಳ ಹೊತ್ತಿನಿಂದ ನಿಂತು ಇದನ್ನು ಗಮನಿಸುತ್ತಿದ್ದ ಒಬ್ಬ ಗ್ರಾಹಕ ಕೊನೆಗೆ ತಡಯಲಾರದೆ..
“ಸ್ವಾಮಿ ಬೆಂಡೆಕಾಯಿಗೆ ಎಚ್ಚರವಾಗಿದ್ದರೆ ಒಂದೂವರೆ ಕಿಲೋ ಕೊಡಿ' ಎಂದ!
4.ಗಂಡ ಆಫೀಸಿನಲ್ಲಿ ಕೂತಿದ್ದಾಗ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿದ”
ಹಕ್ಕಿಯಂತೆ ಬಾನಂಗಳದಲ್ಲಿ ಹಾರಾಡುವ
ಆಸೆ
ಕೆಳಗೆ ಹೆಂಡತಿ ಕಮೇಂಟ್ ಮಾಡಿದಳು
ಭೂಮಿ ಮೇಲೆ ಕಾಲಿಟ್ಟಾಗ ಮನೆಗೆ ಕೊತ್ತಂಬರಿ ಸೊಪ್ಪು ತೆಗೆದುಕೊಂಡು ಬನ್ನಿ..
5.Facebook ನಲ್ಲಿ ಆಯಿತು ಜಗತ್ತಿನ ಅತಿ ದೊಡ್ಡ ಅಪಘಾತ
Chat ಮಾಡೋ ಸಮಯದಲ್ಲಿ ಅವರಿಬ್ಬರಿಗು ಆಗಿತ್ತು ಪ್ರೀತಿ
ಪಾರ್ಕಗೆ ಬಂದರು ಒಬ್ಬರಿಗೊಬ್ಬರು ಆಗಲು ಬೇಟಿ
ಅವಾಗಲೆ ಗೊತ್ತಾಗಿದ್ದು ಅವರಿಬ್ಬರು ಗಂಡ ಹೆಂಡತಿ
Post a Comment